ಚಿತ್ರ: ಹೊಸ ಬೆಳಕು
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಂಗ ರಾವ್ ಎಲ್. ಎಂ.
ಗಾಯನ: ಡಾ|ರಾಜ್ ಕುಮಾರ್

ಹೊಸ ಬೆಳಕು.. ಮೂಡುತಿದೆ..
ಬಂಗಾರದ.. ರಥವೇರುತ
ಆಕಾಶದಿ.. ಓಡಾಡುತ
ಅತ್ತ-ಇತ್ತ ಸುತ್ತ-ಮುತ್ತ ಚೆಲ್ಲಿದಾ..
ಕಾಂತಿಯಾ.. ರವಿ ಕಾಂತಿಯಾ!

ಬಳ್ಳಿಯಲ್ಲಿ ಮೊಗ್ಗು ಹಿಗ್ಗಿ ನಗುತಲಿದೆ
ತಣ್ಣನೆ ಗಾಳಿ.. ಪರಿಮಳ ಹೀರಿ
ಅಲ್ಲಿ-ಇಲ್ಲಿ ಹೂವ ಕಂಪ ಹರಡುತಲಿದೆ |೨|

ಹಕ್ಕಿ ಮುಗಿಲನ್ನು ನೋಡಿ
ಬೆಳಕು ಬಂತೆಂದು ಹಾಡಿ |೨|

ರೆಕ್ಕೆ ಬಿಚ್ಚಿ ಮೇಲೆ ಚಿಮ್ಮಿ ಬಾನಿಗೆ..
ಹಾರಿದೆ!

ಹೊಸ ಬೆಳಕು.. ಮೂಡುತಿದೆ..

ಬೆಟ್ಟದಿಂದ ನೀರು ಜಾರಿ ಧುಮುಕುತಿದೆ
ಸಾಗರ ಸೇರೊ ಆಸೆಯ ತೋರಿ..
ಗಾಳಿಯಂತೆ ವೇಗವಾಗಿ ಹರಿಯುತಲಿದೆ |೨|

ಬೆಳ್ಳಿ ಬೆಳಕನ್ನು ನೋಡಿ
ಮಂಜು ಮರಿಯಾಗಿ ಓಡಿ |೨|

ಎಲೆಯ ಮರೆಯ ಸೇರಿ ನಲಿವ ಕೋಗಿಲೆ..
ಹಾಡಿದೆ!

ಹೊಸ ಬೆಳಕು.. ಮೂಡುತಿದೆ..
ಬಂಗಾರದ.. ರಥವೇರುತ
ಆಕಾಶದಿ.. ಓಡಾಡುತ
ಅತ್ತ-ಇತ್ತ ಸುತ್ತ-ಮುತ್ತ ಚೆಲ್ಲಿದಾ..
ಕಾಂತಿಯಾ.. ರವಿ ಕಾಂತಿಯಾ!

Category: ಕನ್ನಡ ಚಿತ್ರಸಾಹಿತ್ಯ
Category: ಹೊಸ ಬೆಳಕು ಚಿತ್ರ
Category: ಚಿ.ಉದಯಶಂಕರ್ ಸಾಹಿತ್ಯ
Category:Kannada